ಇಂತಹವರು ಹಲಸಿನ ಹಣ್ಣಿನಿಂದ ದೂರವಿದ್ರೆ ಒಳ್ಳೆದು; ಇಲ್ಲದಿದ್ರೆ ಅಪಾಯ ಫಿಕ್ಸ್!

ಹಸಿದವರಿಗೆ ಹಲಸು, ಉಂಡವರಿಗೆ ಮಾವು ಎಂಬ ಮಾತಿದೆ. ಹಲಸಿನ ಹಣ್ಣು ಮೇಲ್ನೋಟಕ್ಕೆ ಒರಟಾಗಿ, ಮೈಮೇಲೆ ಮುಳ್ಳು ಮುಳ್ಳು ರೀತಿ ಕಂಡರೂ ಒಳಗಿರುವ ಹಣ್ಣು ಬಹಳ ಮೃದು ಮತ್ತು ರುಚಿಕರವಾಗಿದೆ. ಇದಲ್ಲದೇ ಹಲಸಿನ ಹಣ್ಣಿನ ಪ್ರತಿಯೊಂದು ಭಾಗವು ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಅನೇಕ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ.

ವಿಟಮಿನ್ ಸಿ, ಮೆಗ್ನೀಸಿಯಮ್, ಕಾರ್ಬೋಹೈಡ್ರೇಟ್ ಅಂಶಗಳು, ಎಲೆಕ್ಟ್ರೋಲೈಟ್ ಅಂಶಗಳು, ಪೊಟಾಷ್ಯಿಯಂ ಹಾಗೂ ನಾರಿನಾಂಶಗಳು ಯಥೇಚ್ಛವಾಗಿ ಸಿಗುವುದರಿಂದ, ಇದೊಂದು ಆರೋಗ್ಯಕಾರಿ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಅನೇಕ ಮಂದಿ ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ, ಇದು ದೇಹಕ್ಕೆ ತುಂಬಾ ಉಪಯುಕ್ತವಾಗಿದೆ.

ಹಲಸಿನ ಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶ ಮತ್ತು ಫೈಬರ್ ಅಂಶ ಇರುತ್ತದೆ. ಅಲ್ಲದೇ ಹಲಸಿನ ಹಣ್ಣನ್ನು ಯಾರು ಬೇಕಾದರೂ ತಿನ್ನಬಹುದು. ಹಲಸಿನ ಹಣ್ಣಿನ ಪ್ರತಿಯೊಂದು ಭಾಗವೂ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಹಲಸಿನ ತೊಲೆ, ಹಲಸಿನ ಬೀಜ ಮತ್ತು ಹಣ್ಣು ಎಲ್ಲವನ್ನು ಕೂಡ ತಿನ್ನಬಹುದು.

Comments

Popular posts from this blog